ಮಂಗಳವಾರ, ಫೆಬ್ರವರಿ 8, 2011

"ಪರೀಕ್ಷಾ ಗುಮ್ಮ" - ಎದುರಿಸುವುದು ಹೇಗೆ?


ಜನವರಿ, ಫೆಬ್ರವರಿ ಪ್ರಾರಂಭವಾಯಿತೆಂದರೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಗುಮ್ಮ ಸವಾರಿಮಾಡತೊಡಗುತ್ತದೆ. ವರ್ಷವಿಡೀ ಆಟ, ಟೀವಿ, ಸಿನಿಮಾ, ಮೊಬೈಲ್, ಫೇಸ್ ಬುಕ್ ಮೊದಲಾದವುಗಳಲ್ಲಿ ತೊಡಗಿಕೊಂಡಿದ್ದ ವಿದ್ಯಾರ್ಥಿಗಳು ಎಚ್ಹರವಾಗುವುದೇ ಜನವರಿ ಬಂದಾಗ. ಒಂದೆಡೆ "ಓದುವುದು ತುಂಬಾ ಇದೆ. ಹೇಗೆ ಓದಲಿ" ಎಂಬ ಭಯ. ಇನ್ನೊಂದೆಡೆ "ಇಷ್ಟು ದಿನ ಕಾಲಹರಣ ಮಾಡಿದೆ" ಅನ್ನುವ ಪಶ್ಚಾತಾಪ. ಇನ್ನೊಂದೆಡೆ ಹೆತ್ತವರಿಂದ "ಎರಡೇ ತಿಂಗಳಿದೆ. ಇನ್ನಾದರು ಓದಿ ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗಿ". ಟೀಚರ್ಸ್ನವರಿಗಂತೂ ಪೋರ್ಶನ್ ಮುಗಿಸುವ ತವಕ. ಇವೆಲ್ಲವುಗಳ ಮಧ್ಯೆ ವಿದ್ಯಾರ್ಥಿ ಅಪ್ಪಚ್ಚಿ.

ಶಾಲೆ ಸುರುವಾಗಿನಿಂದಲೇ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಷ್ಟೇನೂ ತೊಂದರೆಯಾಗಲ್ಲ. ಆದರೆ ಕೊನೆಗಳಿಗೆಯ ವಿದ್ಯಾರ್ಥಿಗಳಿಗೆ ಇದು ಸಂಕಟದ ಸಮಯ. ಆದರೂ ಕಾಲ ಮಿಂಚಿಲ್ಲ. ಇರುವ ಎರಡು ತಿಂಗಳಾದರೂ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಬಹುದು. ಈಗ ಇರುವ ಸಮಯವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದು ವೆಳಾಪಟ್ಟಿಯನ್ನು ರೂಪಿಸಬೇಕು ಮತ್ತು ಅದರ ಪ್ರಕಾರ ಕ್ರಮಬದ್ದವಾಗಿ ಕಲಿಯಲು ಸುರುಮಾಡಬೇಕು. ವಿದ್ಯಾರ್ಥಿಗಳು ತಂದೆತಾಯಿ, ಗುರುಗಳ ಒತ್ತಡಕ್ಕೆ ಓದದೆ, ಕಲಿಯುವ ವಿಷಯದ ಬಗ್ಗೆ ಆಸಕ್ತಿ, ತಮ್ಮದೇ ಆದ ಗುರಿ ಹೊಂದಿದರೆ ಪರೀಕ್ಷೆಯನ್ನು ದೆರ್ಯವಾಗಿ ಎದುರಿಸಬಹುದು. ಕೆಲವೊಂದು ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ ಮರೆವು ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣ ಹಲವಾರು. ತಂದೆತಾಯಿಗಳ ಒತ್ತಡ, ಭಾವೋದ್ವೇಗ (ಸಿಟ್ಟು, ಹೆದರಿಕೆ, ಬೇಸರ, ಒಂಟಿತನ ಇತ್ಯಾದಿ), ಕೀಳರಿಮೆ, ಏಕಾಗ್ರತೆ ಇಲ್ಲದಿರುವುದು, ಕಲಿಯಲಿಕ್ಕೆ ತನ್ನಿಂದ ಆಗುವುದಿಲ್ಲ ಅನ್ನುವ ಮನೋಭಾವ, ಅತಿಯಾದ ನಿರೀಕ್ಷೆ, ಪುನರಾವರ್ತನೆ ಇಲ್ಲದಿರುವುದು, ದೈಹಿಕ ಹಾಗು ಮಾನಸಿಕ ಕಾರಣಗಳು ಹೀಗೆ ಇನ್ನೂ ಹಲವಾರು ಕಾರಣಗಳು ಇವೆ.

ನೆನಪನ್ನು ಯಾವ ರೀತಿ ಹೆಚ್ಚಿಸಬಹುದು? 
  • ಪಾಲಕರು ಮಕ್ಕಳಲ್ಲಿ ಹೆಚ್ಚಿನ ಒತ್ತಡವನ್ನು ಏರದೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿಸಬೇಕು. "ಓದದಿದ್ದರೆ ಜೀವನ ವ್ಯರ್ಥ" ಅನ್ನುವ ಧೋರಣೆಗಿಂತ, ಜೀವನವೆಂದರೆ ಬರಿ ಓದು ಮಾತ್ರವಲ್ಲ, ಅನುತ್ತೀರ್ಣರಾದವರೂ ಕೂಡ ಜೀವನದಲ್ಲಿ ಯಶಸನ್ನು ಸಾದಿಸಿದ್ದಾರೆ ಅನ್ನುವುದನ್ನು ತಿಳಿಯಪಡಿಸಬೇಕು.
  • ಭಾವೊದ್ವೇಗಗಳನ್ನು ಯೋಗ,ವ್ಯಾಯಾಮ, ಒಳ್ಳೆ ಸ್ನೇಹಿತರ ಜೊತೆಗೆ ಮಾತುಕತೆ, ಅಷ್ಟೇ ಅಲ್ಲ ಮನಸನ್ನು ಬೇರೆ ಬೇರೆ ಕಾರ್ಯದಲ್ಲಿ ತೊಡಗಿಸುವುದರಿಂದ ಕಡಿಮೆ ಮಾಡಬಹುದು. 
  • ಅಂಕಗಳ ಬಗ್ಗೆ ಅತಿಯಾದ ನಿರೀಕ್ಷೆ ಮಾಡುವುದಕ್ಕಿಂತ, ನನ್ನಿಂದಾಗುವಷ್ಟು ಪ್ರಯತ್ನ ಮಾಡ್ತಾ ಇದ್ದೇನೆ ಅನ್ನುವ ಮನೋಭಾವವಿದ್ದರೆ ನೆನಪು ತನ್ನಿನ್ದಾಗಿಯೇ ಉಳಿಯುತ್ತದೆ. 
  •  ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಭಯ, ಆತಂಕ ಹೆಚ್ಚಾದರೆ ಆತ್ಮವಿಶ್ವಾಸ ಕುಂದಿ ಮರೆವು ಜಾಸ್ತಿಯಾಗುತ್ತದೆ. 
  • ಯಾವುದೇ ವಿಷಯ ಅರ್ಥವಾಗುವುದಿಲ್ಲ ಅನ್ನುವ ಪೂರ್ವ ಕಲ್ಪನೆ ಇದ್ದರೆ, ಅದರಿಂದ ಹೊರಗೆ ಬನ್ನಿ. ವಿಷಯದ ಬಗ್ಗೆ ಆಸಕ್ತಿ ಇಲ್ಲದಿರುವುದರಿಂದ ಆ ವಿಷಯ ಅರ್ಥವಾಗುವುದಿಲ್ಲ. ಅದರ ಬದಲು ಅರ್ಥವಾಗದ ವಿಷಯವನ್ನು ಗುರುಗಳಿಂದ, ಹಿರಿಯರಿಂದ ಪುನ್ಹ ಕೇಳಿಸಿಕೊಳ್ಳಿ. ಈಗೆ ಮಾಡುವುದರಿಂದ ವಿಷಯ ಅರ್ಥವಾಗಲು ಸುರುವಾಗುತ್ತದೆ. 
  • ಕೆಲವೊಮ್ಮೆ  ವಿದ್ಯಾರ್ಥಿಗಳು ಪಾಠದ ವಿಷಯಗಳಿಗಿಂತ, ಮೊಬೈಲ್, ಇಂಟರ್ನೆಟ್, ಫೇಸ್ ಬುಕ್, ಡಾನ್ಸ್ ,ಮೋಜು ಇವುಗಳ ಹಿಂದೆ ಬೀಳುವುದರಿಂದ ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಿ ಏಕಾಗ್ರತೆ ಇಲ್ಲದೆ ಹೋಗುತ್ತದೆ. ಪುಸ್ತಕ ಕೈಯಲ್ಲಿ ಹಿಡಿದರೂ ಕೂಡ ಮನಸ್ಸು ಮಾತ್ರ ಊರೆಲ್ಲ ಸುತ್ತುತ್ತದೆ. ಇಂತಹ   ವಿದ್ಯಾರ್ಥಿಗಳಿಗೆ ವಿಷಯ ಅರ್ಥವಾಗುವುದಿಲ್ಲ. ಇವೆಲ್ಲವೂ ತಾತ್ಕಾಲಿಕ ಸುಖ ನೀಡುವನ್ತದ್ದು. ಓದುವ ಸಮಯ ಈ ರೀತಿ ಹಾಳು ಮಾಡುವುದಕ್ಕಿಂತ ಓದಿನತ್ತ ನಮ್ಮ ಗುರಿ ಇಟ್ಟರೆ ಏಕಾಗ್ರತೆ ತನ್ನಿಂದ ತಾನೇ ಬರುತ್ತದೆ. ಮರೆವನ್ನು ದೂರ ಮಾಡಬಹುದು. 
  • ಇನ್ನೊಂದು ಮುಖ್ಯ ವಿಷಯವೆಂದರೆ ಓದಿದನ್ನು ಪುನರಾವರ್ತನೆ ಮಾಡುವುದು. ಓದಿದ ವಿಷಯಗಳನ್ನು ಆಗಾಗ ನೆನಪು ಮಾಡಿದಾಗ ನರಕೋಶಗಳು ಉತ್ತೇಜನದಿಂದ ಕೆಲಸ ಮಾಡುತ್ತವೆ. ಮನೋವಿಜ್ಞಾನದ ಪ್ರಕಾರ ಕೇವಲ ೨೦ ಪ್ರತಿಶತ ಮಾತ್ರ ಒಂದು ತಿಂಗಳ ನಂತರ ನೆನಪಿನಲ್ಲಿ ಉಳಿಯುತ್ತದೆ. ಅಷ್ಟೇ ಅಲ್ಲ ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು  ವಿದ್ಯಾರ್ಥಿಗಳು ನಿರ್ದರಿಸಬೇಕು. ಹೆಚ್ಚಿನ  ವಿದ್ಯಾರ್ಥಿಗಳ ಸಮಯ ಅನಗತ್ಯ ವಿಷಯಗಳ ಮೇಲೆ ಕೇಂದ್ರಿಕ್ರತವಾಗಿರುವುದರಿಂದ ಅಗತ್ಯ ವಿಷಯಗಳು ನೆನಪಿನಿಂದ ಹಿಂದೆ ಸರಿಯುತ್ತವೆ. 
ಇನ್ನು ಕೂಡ ಹಲವಾರು ವಿಷಯಗಳು ಪರೀಕ್ಷಾ ತಯಾರಿ ಬಗ್ಗೆ ಇವೆ. ಅವನೆಲ್ಲ ಇನ್ನೊಮ್ಮೆ ಬರಿತ್ತೇನೆ. 

7 ಕಾಮೆಂಟ್‌ಗಳು:

  1. ನಿಮ್ಮ ಸಲಹೆ ಸೂಚನೆಗಳು ನಿಜವಾಗಿಯು ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಾಯದಾಯಕ...
    ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ