ಭಾನುವಾರ, ಜನವರಿ 30, 2011

ಹಣೆಬರಹ

ಕಾಲೇಜಿಗೆ ಹೋಗುತ್ತಿರುವ ನನ್ನ ಪರಿಚಯದ ಒಬ್ಬ ಹುಡುಗ  "ನಾನು ಎಷ್ಟು ಓದಿದರೂ ಕೂಡ ನನಗೆ ತಲೆಗೆ ಹತ್ತುವುದಿಲ್ಲ. ಇದು ನನ್ನ ಹಣೆಬರಹ. ಯಾರು ಏನು ಮಾಡಿದ್ರೂ ಸರಿಹೋಗುವುದಿಲ್ಲ" ಅಂತಾನೆ. ಇನ್ನೊಬ್ಬ ಪೋಷಕರು "ಈ ಮಕ್ಕಳ ಹಣೆಯಲ್ಲಿ ಏನು ಬರ್ದಿದೆಯೋ ಅದೇ ಆಗುವುದು. ಹಣೆಬರಹವನ್ನು ತಪ್ಪಿಸಲ್ಲಿಕ್ಕೆ ಆಗುವುದಿಲ್ಲ." ಅನ್ನೋವರು.  ಹಾಗೆಯೇ ಹೈಸ್ಕೂಲ್ನ ಟೀಚರ್ ಒಬ್ಬರು "ಮಕ್ಕಳು ಪಾಪ ಕಷ್ಟ ಪಟ್ಟು ಓದ್ತಾರೆ. ಅಂಕಪಟ್ಟಿ ಸಿಗುವಾಗ ಮಾತ್ರ ಎಲ್ಲಾ ಅದ್ರಷ್ಟದ ಮೇಲೆ ಅವಲಂಬಿರಿಸುತ್ತದೆ. ಕೆಲವು ವಿದ್ಯಾರ್ಥಿಗಳಿಗಂತೂ ದುರಾದೃಷ್ಟವೇ ತುಂಬಿದೆ. ಎಲ್ಲಾ  ಅವರವರ ಹಣೆಬರಹ". ಈ ಮಾತುಗಳನ್ನು ಮಕ್ಕಳ ಎದುರು ಹೇಳಿದರಂತೂ ಅದರ ಪ್ರಭಾವ ಅವರ ಮೇಲೆ ತುಂಬಾ ಗಾಡವಾಗಿ ಪರಿಣಮಿಸಬಹುದು. ನೀವು ಕೂಡ ಹಲವಾರು ಸಲ ಈ ಹಣೆಬರಹದ ಬಗ್ಗೆ ಮಾತನಾಡಿರಬಹುದು, ಕೇಳಿರಬಹುದು.    

ಹಣೆಬರಹ ಅನ್ನುವಂತದ್ದು ಏನು? ಯಾರು ಮಾಡಿದ್ದು?  ಕೆಲವೊಮ್ಮೆ ನನಗೆ ಅನಿಸಿದ್ದು ಉಂಟು ಈ ಹಣೆಬರಹ ಅನ್ನುವುದು ನಾವು  ಹುಟ್ಟಿದಾಗ ಇರಲಿಲ್ಲ. ಆದರೆ ನಾವು ಬೆಳಿತಾ ಬೆಳಿತಾ ಅದೇಗೆ ನಮಗೆ ಅಂಟುರೋಗದ ಹಾಗೆ  ಅಂಟಿಕೊಂಡಿದೆ  ಅಂಥಾ? ಇದೊಂದು ನಾವೇ ಬೆಳೆಸಿದಂತಹ ಮನಸ್ಸಿನ ಪಟ್ಟಿ. ಸಣ್ಣವರಿರುವಾಗ ತಂದೆತಾಯಿಗಳಿಂದ, ನಮ್ಮನ್ನು ಪೋಷಿಸುವವರಿಂದ, ಶಾಲಾಶಿಕ್ಷಕರಿಂದ, ಬಂದುಬಳಗ, ನೆರೆಕೆರೆಯವರಿಂದ ಈಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಮ್ಮೆ ಮಕ್ಕಳ ಮನಸ್ಸಿನಲ್ಲಿ ಈ ವಿಷಯ ಸ್ಥಿರವಾಯಿತೆಂದರೆ ಮುಂದೆ ದೊಡ್ಡವರಾಗುತ್ತಾ ಇನ್ನೂ ಕೂಡ ಬಲಿತು ದೃಡವಾಗುತ್ತದೆ. ಮುಂದೆ ಇದನ್ನು ಮನಸ್ಸಿನಿಂದ ತೆಗೆದು ಹಾಕಲು ಕಷ್ಟಪಡಬೇಕಾಗುತ್ತದೆ. ಇದರಿಂದಾಗಿ ಮಾನಸಿಕ ಕಾಯಿಲೆಗೆ ಒಳಗಾಗುವ ಜನ ಕೂಡ ತುಂಬಾ ಇದ್ದಾರೆ. ಮಕ್ಕಳು ಸಣ್ಣ ಇರುವಾಗಲೇ ಈ ತರಹದ ಹಣೆಬರಹದ ಪಟ್ಟಿಯನ್ನು ಅವರ ಮೇಲೆ ಹಾಕದಿರುವುದು ಉತ್ತಮ. ಇದರ ಬದಲು ಸಕಾರಾತ್ಮಕ ಚಿಂತನೆ, ದ್ದೆರ್ಯ, ಆತ್ಮ ವಿಶ್ವಾಸ ಮುಂತಾದವುಗಳನ್ನು ಮಕ್ಕಳಲ್ಲಿ ಅಳವಡಿಸಿಕೊಂಡರೆ ಮುಂದೊಂದು ದಿನ ಆ ಮಕ್ಕಳು ಜಗತ್ತಿಗೆ ಶೇಷ್ಟವಾಗುವುದರಲ್ಲಿ ಆಶ್ಚರ್ಯವೇನಿಲ್ಲ. .  



3 ಕಾಮೆಂಟ್‌ಗಳು: